By Someshwar R Gurumath, Rashtram Learner
ರವಿಯೊಳಗಿನ ಬೆಳಕಿನಂತೆ,
ಹನಿಯೊಳಗಿನ ಚಲನೆಯಂತೆ,
ಲೇಖನಿಯ ಬಾಹುಗಳ,
ಬಿಗಿದಪ್ಪಿದ ಶಾಹಿಯಂತೆ.
ದ್ವೈತದಲಾರಂಭಿಸಿದ,
ನಿನ್ನೆಡೆಗಿನ ಪಯಣ,
ವಿಶಿಷ್ಟಾದ್ವೈತದಲಿ ಪಳಗಿ,
ಅದ್ವೈತವ ಬೋಧಿಸಲು.
ಸ್ವಭಾವದ ಸ್ವದೇಶದಲಿ,
ಸ್ವಂತಿಕೆಯ ಸಾನುರಾಗವ,
ಸಂಪೂರ್ಣದಾನದಲಿ,
ಶಾರದೆಗೆ ಅರ್ಪಿಸಲು,
ಒಂದಾದ ಭಾವಕೂಟದ,
ಅನುರಾಗದಶರೀರವಾಣಿ,
ಸ್ವಪ್ನಯಾನದ ಗೂಡ ಮರುನಿರ್ಮಿಸಿ,
ಆ ನಿನ್ನ ದಾರಿಯ ಕಾದಿರಲು,
ಕಲ್ಪನೆಯಲೂ ಕನವರಿಸಿ,
ನಿತ್ಯವೂ ನೂತನವಾಗರಸಿ,
ನಿನ್ನೇ ವರಿಸುವ ಎನ್ನಕ್ಷರಗಳಿಗೆ,
ನೀಡಬಲ್ಲೆಯಾ ಸಾಕ್ಷಾತ್ಕಾರ?
Is there a chance of ‘Sakshatkaara’?
Like the Light of the Sun,
Like the flow of the drop,
Like the ink,
Tightly embracing a pen.
From an idea of ‘Dvaita’
Trying to qualify in ‘Vishita-Advaita’
And finally becoming ‘Advaita’
Is my journey.
In comforts of my Swabhava,
Singing my own tunes,
O Sharade, I surrender,
My all to you.
My bunch of feelings,
With an ear to the “Ashareeravani”
Have rebuilt a nest of dreams,
In your anticipation.
Ruminating in my ‘Kalpana’,
Searching you in a new way every day,
To my ‘Aksharas’ that have soulfully wedded you,
Is there a chance of ‘Sakshatkaara’?